Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಸ್ವೀಟಿ ನನ್ನ ಜೋಡಿ` ಚಿತ್ರಕ್ಕೆ ಮೂರನೇ ಹಂತದ ಚಿತ್ರೀಕರಣ
Posted date: 09 Wed, Jan 2013 ? 01:41:22 PM

  ಎಚ್.ಡಿ.ಕುಮಾರಸ್ವಾಮಿ ಅರ್ಪಿಸುವ, ಶಮಿಕಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾಕುಮಾರಸ್ವಾಮಿ ಅವರು ನಿರ್ಮಿಸುತ್ತಿರುವ ‘ಸ್ವೀಟಿ ನನ್ನ ಜೋಡಿ ಚಿತ್ರಕ್ಕೆ ಎರಡು ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಮೂರನೇ ಹಂತದ ಚಿತ್ರೀಕರಣ ಇದೇ ತಿಂಗಳ ಹನ್ನೊಂದರಿಂದ ಆರಂಭವಾಗಲಿದೆ. ಬೆಂಗಳೂರು, ಗೋವಾ ಮುಂತಾದ ಕಡೆ ಮುವತ್ತು ದಿನಗಳ ಚಿತ್ರೀಕರಣ ನಡೆಯಲಿದೆ.
     ವಿಜಯಲಕ್ಷ್ಮೀಸಿಂಗ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್‌ಜನ್ಯರ ಸಂಗೀತ ನೀಡಿದ್ದಾರೆ. ಅಜಯ್ ವಿನ್ಸಂಟ್ ಛಾಯಾಗ್ರಹಣ, ಕೆಂಪರಾಜ್ ಸಂಕಲನ, ಈಶ್ವರಿ ಕುಮಾರ್ ಕಲಾನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಹರ್ಷ, ಇಮ್ರಾನ್, ಮುರಳಿ ನೃತ್ಯ ನಿರ್ದೇಶನ ‘ಸ್ವೀಟಿ ನನ್ನ ಜೋಡಿ ಚಿತ್ರಕ್ಕಿದೆ. ರವಿರಾಜ್ ಹಾಗೂ ಯಾದವ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ಆದಿತ್ಯ, ರಾಧಿಕಾ, ರಮ್ಯಕೃಷ್ಣ, ಗಿರೀಶ್ ಕಾರ್ನಾಡ್, ಸಾಧುಕೋಕಿಲಾ, ಉಮಾಶ್ರೀ, ತಬಲನಾಣಿ, ಶರತ್‌ಲೋಹಿತಾಶ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಸ್ವೀಟಿ ನನ್ನ ಜೋಡಿ` ಚಿತ್ರಕ್ಕೆ ಮೂರನೇ ಹಂತದ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.